ಬಾವಿ ನೀರು


 ನೆನಪಿನಂಗಳದಿಂದ ..

ದೊಡ್ಡಬಳ್ಳಾಪುರದಲ್ಲಿ ಅಪ್ಪ ಡಾಕ್ಟರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು ,ಆ ಊರಿನಲ್ಲಿ ಆ ಸಮಯದಲ್ಲಿ ನೀರಿಗೆ ತೊಂದರೆ . ಮನೆಯಿಂದ ಸ್ವಲ್ಪ ದೂರದಲ್ಲಿ ಕೆರೆ . ಅದರ ಹತ್ತಿರ ಸಿಹಿನೀರಿನ ಬಾವಿ . ಮನೆಗೆ ಬಳಸಲುಗಾಡಿಯಲ್ಲಿ ನೀರು ತರಿಸಿಕೊಳ್ಳಬೇಕಾಗಿತ್ತು . ಅದು ಉಪ್ಪು ನೀರು . ಕುಡಿಯಲು ಬರುತ್ತಿರಲಿಲ್ಲ , ಅಮ್ಮ ಬಾವಿಗೆ ಹೋಗಿ ಒಂದೆರಡು ಕೊಡ ನೀರು ಕುಡಿಯಲು ತರುತ್ತಿದ್ದರು . !! ಬಾವಿ ಹಗ್ಗ ನಾವೇ ತೆಗೆದುಕೊಂಡು ಹೋಗಬೇಕಿತ್ತು . ಹಗ್ಗ ಹಿಡಿದುಕೊಂಡು ಅಮ್ಮನ ಜೊತೆಗೆ ನಾನು ಹೋಗುತ್ತಿದ್ದೆ . ದೊಡ್ಡೇರಿ ಗೆಹೋದ ಮೇಲೆ ಮನೆ ಅಂಗಳದಲ್ಲೇ ಬಾವಿ , ಮಳೆಗಾಲದಲ್ಲಿ ಕೈ ಹಾಕಿದರೆ ನೀರು ಸಿಗುವಷ್ಟು ಮೇಲೆ ನೀರು .. ! ಅಮ್ಮನಿಗೆ ತುಂಬಾ ಖುಷಿ ಆಗಿತ್ತು . ಸಣ್ಣ ಸಣ್ಣ ಸಂದರ್ಭ , ಘಟನೆಗಳಿಗೆ ಅಮ್ಮ ಸಂಭ್ರಮಿಸುತ್ತ ಇದ್ದರು . ಮಕ್ಕಳ ಹಾಗೆ ಮನಸ್ಸು .. ನೆನಪಿನ ಶಕ್ತಿ ಅಗಾಧ ,

Comments