Posts

ಸವಿ ನೆನಪುಗಳು ಬೇಕು

Image
ನಾವು ದೊಡ್ಡಬಳ್ಳಾಪುರದಲ್ಲಿ ಇದ್ದಾಗ .. ಅಪ್ಪನ ಪೇಶಂಟ್ಗಳು ಹಳ್ಳಿಯಿಂದ ಬರುವಾಗ ಅವರೆಕಾಯಿ , ಹುಣಿಸೆ ಹಣ್ಣು ಎಲ್ಲಾ ತರುತ್ತಿದ್ದರು . ಅಂಗಡಿಗಿಂತ ಕಡಿಮೆ ಬೆಲೆಯಲ್ಲಿಕೊಡುತ್ತಿದ್ದರು . ಅಮ್ಮನಿಗೆ ಹುಣಿಸೇಹಣ್ಣಿ ನ ಬೀಜ ತೆಗೆದು , ಚೊಕ್ಕ ಮಾಡಿ ಸ್ವಲ್ಪ ಉಪ್ಪು ಸೇರಿಸಿ ಒರಳಲ್ಲಿ ಕುಟ್ಟಿ ಉಂಡೆ ಕಟ್ಟಿ ದೊಡ್ಡ ಜಾರಿಯಲ್ಲಿ ಇಡುತ್ತಿದ್ದರು . ಈ ವರ್ಷಕ್ಕೆ ಸಾಕು ಅನ್ನುತ್ತಿದ್ದರು . ಹುಣಿಸೇಹಣ್ಣಿನ ಗೊಜ್ಜು ಯಾವಾಗಲೂ ಇರುತ್ತಿತ್ತು . ನಮಗೆ ಅಲ್ಲಿ ಅಯ್ಯಂಗಾರ್ ಕುಟುಂಬಗಳ ಬಳಕೆಹೆಚ್ಚಿತ್ತು . ಅವರಿಂದ ಪುಳಿಯೋಗರೆ ಗೊಜ್ಜು ಕಲಿತು ಮಾಡಿಡುತ್ತಿದ್ದರು . ಹಳ್ಳಿಯಿಂದ ಬೆಣ್ಣೆ ಮಾರುವವನು ಬಂದರೆ ಅಪ್ಪನದೇ ವ್ಯಾಪಾರ !! ಐದರಿಂದ ಹತ್ತು ಕೆಜಿ ಬೆಣ್ಣೆ . ಅಮ್ಮ ಅದನ್ನು ಹದವಾಗಿ ಕಾಯಿಸಿ ಮೇಲೆ ವೀಳೆಯದೆಲೆ ಹಾಕುತ್ತಿದ್ದರು . ನನ್ನನ್ನು ವೀಳೆಯದೆಲೆ ತರಲು ಅಂಗಡಿಗೆ ಓಡಿಸುತ್ತಿದ್ದರು .ಭರಣಿಗಳ ತುಂಬಾ ಘಮ ಘಮ ಬೆಣ್ಣೆ ! ಬೆಣ್ಣೆ ಕಾಯಿಸಿದ ಮರುದಿನ ಬೆಣ್ಣೆ ದೋಸೆ ನಮಗೆಲ್ಲಾ.. ನನಗೆ ದೋಸೆ ಕಾವಲಿ ಮೇಲಿರುವಾಗಲೇ ಸಕ್ಕರೆ ಹಾಕಿ ಸುತ್ತಿ ಕೊಡಬೇಕಿತ್ತು !! ಬೆಣ್ಣೆ ಕಾಯಿಸಿದ ಪಾತ್ರೆಯಲ್ಲಿ ಹುರಳಿಕಾಯಿ ಹುಳಿ .. ಕುದಿಯುತ್ತಿದ್ದರೆ . ಜಗಲಿಗೆ ಪರಿಮಳ ಬರುತ್ತಿತ್ತು . ಅಪ್ಪ ಕ್ಲಿನಿಕ್ ಬಾಗಿಲುಹಾಕೋ ಹೊತ್ತಿಗೆ ಸರಿಯಾಗಿ ಅಮ್ಮ ಹುಳಿಗೆ ಒಗ್ಗರಣೆ ಹಾಕುತ್ತಿದ್ದರು . ಚಾಪೆ ಹಾಕು , ಲೋಟ ಇಡು . ಅಂತ ಅಮ್ಮ ನನಗ ಆದೇಶ ಮಾಡುತ್ತಿದ್ದರು . ಅಪ್ಪ ಕೈ ಕಾಲ

ಬಾವಿ ನೀರು

Image
 ನೆನಪಿನಂಗಳದಿಂದ .. ದೊಡ್ಡಬಳ್ಳಾಪುರದಲ್ಲಿ ಅಪ್ಪ ಡಾಕ್ಟರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು ,ಆ ಊರಿನಲ್ಲಿ ಆ ಸಮಯದಲ್ಲಿ ನೀರಿಗೆ ತೊಂದರೆ . ಮನೆಯಿಂದ ಸ್ವಲ್ಪ ದೂರದಲ್ಲಿ ಕೆರೆ . ಅದರ ಹತ್ತಿರ ಸಿಹಿನೀರಿನ ಬಾವಿ . ಮನೆಗೆ ಬಳಸಲುಗಾಡಿಯಲ್ಲಿ ನೀರು ತರಿಸಿಕೊಳ್ಳಬೇಕಾಗಿತ್ತು . ಅದು ಉಪ್ಪು ನೀರು . ಕುಡಿಯಲು ಬರುತ್ತಿರಲಿಲ್ಲ , ಅಮ್ಮ ಬಾವಿಗೆ ಹೋಗಿ ಒಂದೆರಡು ಕೊಡ ನೀರು ಕುಡಿಯಲು ತರುತ್ತಿದ್ದರು . !! ಬಾವಿ ಹಗ್ಗ ನಾವೇ ತೆಗೆದುಕೊಂಡು ಹೋಗಬೇಕಿತ್ತು . ಹಗ್ಗ ಹಿಡಿದುಕೊಂಡು ಅಮ್ಮನ ಜೊತೆಗೆ ನಾನು ಹೋಗುತ್ತಿದ್ದೆ . ದೊಡ್ಡೇರಿ ಗೆಹೋದ ಮೇಲೆ ಮನೆ ಅಂಗಳದಲ್ಲೇ ಬಾವಿ , ಮಳೆಗಾಲದಲ್ಲಿ ಕೈ ಹಾಕಿದರೆ ನೀರು ಸಿಗುವಷ್ಟು ಮೇಲೆ ನೀರು .. ! ಅಮ್ಮನಿಗೆ ತುಂಬಾ ಖುಷಿ ಆಗಿತ್ತು . ಸಣ್ಣ ಸಣ್ಣ ಸಂದರ್ಭ , ಘಟನೆಗಳಿಗೆ ಅಮ್ಮ ಸಂಭ್ರಮಿಸುತ್ತ ಇದ್ದರು . ಮಕ್ಕಳ ಹಾಗೆ ಮನಸ್ಸು .. ನೆನಪಿನ ಶಕ್ತಿ ಅಗಾಧ ,